Ads Google

Sunday, March 27, 2016

ನೆನಪುಗಳು

ತಿರುತಿರುಗಿ ಅಲೆದಾಡಿ ತಂಪೆಲರು ಬೀಸಿರಲು
ಹರಿಹರಿದು ಜಲಧಾರೆ ನೊರೆಯಾಗಿ ಸುರಿದಿರಲು
ಸರಸರನೆ ಎಲೆನಡುವೆ ಮರೆಯಾಗಿ ಹೋಗಿರಲು
ಬರಿದಾಗೆ ನೆಲಹಸಿರು ತೃಣವೆಲ್ಲ ಮಲಗಿರಲು

ಹೊಸ recipe....

ನೊರೆ ನೊರೆ ಹಾಲು ಕೆನೆ ಕೆನೆ ಮೊಸರು
ಸಿಹಿ ಸಿಹಿ ಜೇನು ರಸ ರಸ ದ್ರಾಕ್ಷಿ 
ಹುಳಿ ಹುಳಿ ಮಾವು ಕರಿ ಕರಿ ಮೆಣಸು
ತಿಳಿ ತಿಳಿ ನೀರು ಬೆರೆತರೆ ಪಾನಕ

ವರುಣದೇವನೆ ಧರೆಗೆ ಬಾರೊ
ಹರಣಮಾಡುತ ಭುವಿಯ ತಾಪವ
ಅರುಣನಾಟವ ಮೊಟಕುಗೊಳಿಸಿ
ಕರುಣೆತೋರಿ ತಿರೆಯ ನೆನೆಸು

ಶಿಷ್ಟನಾಗಿರು ಮನುಜನೆ
ಕಷ್ಟವೆಲ್ಲವನೆದುರಿಸಿ
ನಷ್ಟವಿಲ್ಲವೊ ಇಳೆಯಲಿ
ಇಷ್ಟಜೀವಿಯ ಬಾಳಲಿ

ಭ್ರಷ್ಟನಾದವ ಬಡವನೆ
ಕ್ಲಿಷ್ಟವೆಲ್ಲವು ಸುಳ್ಳಲಿ
ವೃಷ್ಟಿಸಿರಿ ತಾತ್ಕಾಲಿಕ
ಶ್ರೇಷ್ಠತೆಗೆ ಸಮವಿಲ್ಲವು

Endless journey. ..

Quest to get the
Best of joy with
Nest of peace in
West of life....

ಮಾಡುವ ಮಾಟದಿ ಧ್ಯಾನವಿಟ್ಟಿರಬೇಕು   
ನೋಡುವ ನೋಟದಿ ಆಸೆತೋರಲುಬೇಡ       
ಹಾಡುವ ಕೂಟದಿ ಮೌನದಿಂದಿರಬೇಕು
ಆಡುವ ಆಟದಿ ಆನಂದವಿರಬೇಕು

ಶರಣು ದೇವನೆ ಕಷ್ಟ ಕಳೆವನೆ
ಕರುಣೆ ತೋರಿಸಭೀಷ್ಟ ನೀಡುತ
ಕರವ ಪಿಡಿಯುತನಿಷ್ಟ ನೀಗಿಸು
ಚರಣ ಪಿಡಿವೆನು ಸೃಷ್ಟಿಯೊಡೆಯನೆ
_______________________

ಬಾರೊ ಪ್ರೇಮಕುಮಾರ
ತಾರೊ ನ್ಯಾನೊ ಕಾರ
ತೋರೊ ಅದರಲಿ ಊರ
ಕೂರೊ ಹೋಗದೆ ದೂರ

ಬಾರೆ ಪ್ರೇಮಕುಮಾರಿ
ಏರೆ ಪಕ್ಕಕೆ ಹಾರಿ
ನೀರೆ ನಗುವನು ಬೀರಿ
ಊರೆ ಉರಿಸುವ ಪೋರಿ
________________________

No comments:

Post a Comment