ವಾಮನನನ ನಿಜವನರಿತು ಸ್ವಾಮಿಯವಗೆ ಭಿಕ್ಷೆಯೀವ
ಹಿರಿಮೆಯದುವೆ ಬಾಳಲೊಂದು ದಿವ್ಯಸಂಧಿ ಭವ್ಯಕ್ಷಣವು
ನರರಿಗೆಂದು ದೊರೆಯದಂತ ಭಾಗ್ಯವೊಂದು ದೊರೆಗೆ ಸಿಗಲು
ಕಿರಿಯನೆದುರು ಹಿರಿಯ ಬಾಗಿ ಕುಳಿತನವನು ರಾಜಯೋಗಿ
ಮೂರುಪಾದಕೆಡೆಯ ಬೇಡೆ ಬಲಿಯು ಒಡನೆ ನೀಡಲೊಪ್ಪಿ
ಭುವಿಯ ಮೇಲೆ ಒಂದು ಹೆಜ್ಜೆ ನಭದಲೊಂದು ಪಾದವಿಡಲು
ಉಳಿದ ಪದಕೆ ತಲೆಯನಿತ್ತು ಮುಕ್ತಿ ಪಡೆದ ಚಕ್ರವರ್ತಿ ಪುಣ್ಯವಂತನು
Tuesday, December 8, 2015
ಬಲಿಪಾಡ್ಯಮಿ
Subscribe to:
Post Comments (Atom)
No comments:
Post a Comment