ಪ್ರಾತಃವಂದಿತ ಡಿವಿಜಿ...
ಕಗ್ಗಂಟಿನ ಕೋಟಲೆಗಳ ಸಂಯಮದಿಂ ಪಾರುಗೈದು
ಮುಗುಳುನಗೆಯೊಳುತ್ಸಾಹದಿ ಜೀವನವನನುಭವಿಸಿ
ಕಗ್ಗವೆಂಬ ಸುಕೃತಿಯಲ್ಲಿ ಬಾಳಿನೊಳತಿರುಳನ್ನಿರಿಸಿ
ಜಗಕೆದಾರಿತೋರಿದ ದಿವಿಜನೊಡೆಯಂಗೆ ಶರಣು
ಶಿಸ್ತನು ಪಾಲಿಸೊ
ಆಸ್ತಿಯ ಗೌಣಿಸೊ
ವಿಸ್ತರ ತತ್ವದ
ಪುಸ್ತಕ ಕಗ್ಗ
ಜೀವನದಾಟದ ಬಯಲಲಿ ಬೆಂದು
ಮಾವನು ಬೇವನು ಬೆಸೆಯುತ ಉಂಡು
ನೋವಲಿ ನಲಿವಲಿ ಶಿಸ್ತಿನ ಗಂಡು
ಪಾವನಮೂರ್ತಿಗೆ ನಮಿಪೆವು ಬಾಗಿ
ಬ್ರಹ್ಮಪುರಿಯ ಭಿಕ್ಷುಕನು
ಕರ್ಮಹೊರೆಯ ಶಿಕ್ಷೆಯಲಿ
ಮರ್ಮಗಳನಲಕ್ಷಿಸದ
ಧರ್ಮನಿರತ ರಕ್ಷಿತನು
No comments:
Post a Comment