Ads Google

Sunday, March 27, 2016

ನೆನಪುಗಳು

ತಿರುತಿರುಗಿ ಅಲೆದಾಡಿ ತಂಪೆಲರು ಬೀಸಿರಲು
ಹರಿಹರಿದು ಜಲಧಾರೆ ನೊರೆಯಾಗಿ ಸುರಿದಿರಲು
ಸರಸರನೆ ಎಲೆನಡುವೆ ಮರೆಯಾಗಿ ಹೋಗಿರಲು
ಬರಿದಾಗೆ ನೆಲಹಸಿರು ತೃಣವೆಲ್ಲ ಮಲಗಿರಲು

ಹೊಸ recipe....

ನೊರೆ ನೊರೆ ಹಾಲು ಕೆನೆ ಕೆನೆ ಮೊಸರು
ಸಿಹಿ ಸಿಹಿ ಜೇನು ರಸ ರಸ ದ್ರಾಕ್ಷಿ 
ಹುಳಿ ಹುಳಿ ಮಾವು ಕರಿ ಕರಿ ಮೆಣಸು
ತಿಳಿ ತಿಳಿ ನೀರು ಬೆರೆತರೆ ಪಾನಕ

ವರುಣದೇವನೆ ಧರೆಗೆ ಬಾರೊ
ಹರಣಮಾಡುತ ಭುವಿಯ ತಾಪವ
ಅರುಣನಾಟವ ಮೊಟಕುಗೊಳಿಸಿ
ಕರುಣೆತೋರಿ ತಿರೆಯ ನೆನೆಸು

ಶಿಷ್ಟನಾಗಿರು ಮನುಜನೆ
ಕಷ್ಟವೆಲ್ಲವನೆದುರಿಸಿ
ನಷ್ಟವಿಲ್ಲವೊ ಇಳೆಯಲಿ
ಇಷ್ಟಜೀವಿಯ ಬಾಳಲಿ

ಭ್ರಷ್ಟನಾದವ ಬಡವನೆ
ಕ್ಲಿಷ್ಟವೆಲ್ಲವು ಸುಳ್ಳಲಿ
ವೃಷ್ಟಿಸಿರಿ ತಾತ್ಕಾಲಿಕ
ಶ್ರೇಷ್ಠತೆಗೆ ಸಮವಿಲ್ಲವು

Endless journey. ..

Quest to get the
Best of joy with
Nest of peace in
West of life....

ಮಾಡುವ ಮಾಟದಿ ಧ್ಯಾನವಿಟ್ಟಿರಬೇಕು   
ನೋಡುವ ನೋಟದಿ ಆಸೆತೋರಲುಬೇಡ       
ಹಾಡುವ ಕೂಟದಿ ಮೌನದಿಂದಿರಬೇಕು
ಆಡುವ ಆಟದಿ ಆನಂದವಿರಬೇಕು

ಶರಣು ದೇವನೆ ಕಷ್ಟ ಕಳೆವನೆ
ಕರುಣೆ ತೋರಿಸಭೀಷ್ಟ ನೀಡುತ
ಕರವ ಪಿಡಿಯುತನಿಷ್ಟ ನೀಗಿಸು
ಚರಣ ಪಿಡಿವೆನು ಸೃಷ್ಟಿಯೊಡೆಯನೆ
_______________________

ಬಾರೊ ಪ್ರೇಮಕುಮಾರ
ತಾರೊ ನ್ಯಾನೊ ಕಾರ
ತೋರೊ ಅದರಲಿ ಊರ
ಕೂರೊ ಹೋಗದೆ ದೂರ

ಬಾರೆ ಪ್ರೇಮಕುಮಾರಿ
ಏರೆ ಪಕ್ಕಕೆ ಹಾರಿ
ನೀರೆ ನಗುವನು ಬೀರಿ
ಊರೆ ಉರಿಸುವ ಪೋರಿ
________________________

Wednesday, March 16, 2016

Endless journey

Quest to get the
Best of joy with
Nest of peace in
West of life....

ಶಿಷ್ಟನಾಗಿರು ಮನುಜನೆ
ಕಷ್ಟವೆಲ್ಲವನೆದುರಿಸಿ
ನಷ್ಟವಿಲ್ಲವೊ ಇಳೆಯಲಿ
ಇಷ್ಟಜೀವಿಯ ಬಾಳಲಿ

ಭ್ರಷ್ಟನಾದವ ಬಡವನೆ
ಕ್ಲಿಷ್ಟವೆಲ್ಲವು ಸುಳ್ಳಲಿ
ಸೃಷ್ಟಿಸಿರಿ ತಾತ್ಕಾಲಿಕ
ಶ್ರೇಷ್ಠತೆಗೆ ಸಮವಿಲ್ಲವು

ಕೈಯಚಾಚಿ ನೀಡುವವನು
ನಗುತ ಮಾತನಾಡುವವನು
ಮನವತೆರೆದು ಪ್ರೀತಿಸುವನು
ಅವನೆ ಶುದ್ಧ ಮಾನವನು

ಬಿಟ್ಟಿದೆ ಶವವನು ಆತ್ಮವು ತೊರೆದು
ಕಟ್ಟಿಹ ಅರಮನೆ ಶಾಶ್ವತ ಇರದು
ಮುಟ್ಟಿದ ಹೃದಯವೆ ಬಾಳ್ವೆಯ ಬಿರುದು
ಮೆಟ್ಟೆಹ ನೆಲವದು ಎಲ್ಲವ ಬಲ್ಲದು

ದುಡಿಯುವ ಕೈಗಳು ದೇಶಕೆ ದೋಸ್ತಿ
ಹೊಡೆಯುವ ದೊರೆಗಳಿಗಾಗಲಿ ಶಾಸ್ತಿ
ನುಡಿಯುವ ದಣಿಗಳು ಎಲ್ಲೆಡೆ ಜಾಸ್ತಿ
ಗಡಿಯಲಿ ಕಾಯುವ ಯೋಧರೆ ಆಸ್ತಿ

ಶಿಕ್ಷಕಿಯೆಂದಿಗು ಶಾಲೆಯ ಒಡವೆ
ಭಿಕ್ಷುಕನೆಲ್ಲೆಡೆ ಅಲೆಯುವ ಒಡೆಯ
ಲಕ್ಷ್ಯವೆ ನಿಶ್ಚಿತ ಧ್ಯೇಯದ ಹಾದಿ
ಲಕ್ಷವಲಕ್ಷಿಸೆ ಅಕ್ಷಯವೆಲ್ಲವು

ತಾಯ ನನೆಯುತ ನಮಿಪೆನವಳಿಗೆ
ಮಾಯೆ ರೂಪದಿ ಕಾಯ್ದು ಎಮ್ಮನು
ಕಾಯ ಬೆಳೆಸಿದ ತ್ಯಾಗಮೂರ್ತಿ
ಆಯು ತುಂಬಿದ ಮಾತೆ ದೇವತೆ

ವಿಶ್ವರೂಪಿ ಜನ್ಮದಾತೆ
ವಿಶ್ವಕೋಶ ಎಮ್ಮ ಮಾತೆ
ಶಾಲೆಯವಳು ಜ್ಞಾನದಾತೆ
ನಾವು ಕಂಡ ಯಶೋಗಾಥೆ

ಅಪರಿಮಿತ ಆನಂದವ
ಅನಿಗಧಿತ ಅನುರಾಗವ          
ಅನುದಿನವು ಆರೋಗ್ಯವ            
ಅನಿತಿನಿತು ಅನುಭವಿಸುತ
ಅನಿಯಮಿತ ಬಾಳನಡೆಸು
ಅನುಕರಣೆ ಬೇಕಿಲ್ಲ ಸಂತಸಕೆ

ಆವುದನಾಬೇಡಲೆನ್ನೊಡೆಯನ
ಕಾವನಿರಲಾದುರಿತನಿವಾರಕ
ಸೇವೆಗೈವುದನರಿತನಾಸೇವಕ
ಪಾವನನಾದೆನೈಯವನಭಜಿಸುತ

ಇವನವ ಮೋಹನ....

ಕರೆದರೆ ಬರುವನು ಹೊರೆಕೊರೆಯುವನು
ಮರೆತರೆ ಕರೆವನು ಮೊರೆಕೇಳುವನು
ಸಿರಿಯರಸನ ಸರಿಸಮನಾರಿಹನು
ದೊರೆಯವನೆನೆ ಹರಿ ಗುರಿತೋರುವನು

Wednesday, February 24, 2016

Sunrise

ಬಾನಂಚಲಿ ಬಣ್ಣಚೆಲ್ಲಿ
ದಿನಪನೇರಿ ಬೆಳಕ ಹರಡಿ
ಕೆಂಪಾಗಿಹ ನಭದ ಕಡಲ
ಹೊನ್ನ ಕಿರಣದಲೆಯ ನಡುವೆ
ಮೋಡ ನೌಕೆಯಲ್ಲಿ ಭಾನು
ಬಾಳಯಾನ ಸಾಗಿಸಿಹನು

ಬೆಳ್ಳಿಯ ಬೆಳಕನು ಬಾನಲಿ ಪಸರಿಸಿ     
ತಳ್ಳಿದನಾಗಸದಂಚಿಗೆ ನಿಶೆಯನು
ಒಳ್ಳೆಯ ಹರುಷವ ಹರಡಿದ ದಿನಪನು
ಪೊಳ್ಳಿನ ಜೊಳ್ಳಿನ ನಿಜಗಳ ಸಾರಿ

ನಿಶೆಯ ತೋಟದ ತಾರೆ ನಡುವೆ
ಶಶಿಯ ಅಂದವು ಮನವ ಸೆಳೆಯೆ
ಉಷೆಯ ಕಿರಣವ ನಭದಿ ಹರಡುತ
ವಶಕೆ ಪಡೆದನು ಭಾಸ್ಕರ

ಚಂದದ ಬೆಳಗಿನ ಭಾಸ್ಕರನುದಯಿಸಿ 
ಬಂದಿಹ ಬಾಳನು ಬೆಳಗಿ
ಅಂದದ ಹೊನ್ನಿನ ರಶ್ಮಿಯ ಹರಡುತ
ತಂದನು ಬೆಳ್ಳಿಯ ನಗುವ

ಮೂಡಣದಿಂ ಕೆಂಗೋಳವು
ಪಡುವಣದೆಡೆ  ಚೆಂಗನೆಗೆದು
ಬಿಡುವಿಲ್ಲದ ಭಂಟನಂತೆ
ಗುಡುಗುತಿಹುದು ಚಂದ್ರನರಸಿ

Wednesday, February 3, 2016

Poetry

ಹನಿಮಂಜು ಧರೆಗುರುಳಿ ಜಲಧಾರೆಯಾಗದು
ನೊಣ ರೆಕ್ಕೆ ಬಡಿದೊಡನೆ ಬಿರುಗಾಳಿಯೇರದು
ರವಿಯೇರಿ ಬೆಳಕೀವ ಕೋಳಿ ಮಲಗಿದ್ದರೂ
ನೀ ಕುನ್ನಿಯದನರಿಯೊ, ಎಲೆ ಮಾನವ

ಇಷ್ಟವಾದದ್ದು ಇಷ್ಟವಾಗದ್ದು
ಕಷ್ಟವಾದದ್ದು ಕಷ್ಟವಾಗದ್ದು 
ನಷ್ಟವಾದದ್ದು ನಷ್ಟವಾಗದ್ದು 
ಇಷ್ಟೆ ಬಾಳಿಗೆ ಪುಷ್ಟಿ ಎಲೆ ಮಾನವ

ಭಯದಲಿ ಭರದಲಿ ಬರದಿಹ ಬರಹವು
ಬಲವಿರೆ ಬರುವುದು ಬಯಸದೆ ಬಿರುಸಲಿ  
ಬಿಸಿಯಲಿ ಬೆವರುತ ಬೆಸೆಯುತ ಬಸಿಯುತ
ಬೆರಗಲಿ ಬರೆವುದೆ ಬವಣೆಯ ಭಾರ

Friday, January 15, 2016

ಬಡಗಿಯು ಒಡೆಯ

ಬಡಗಿ ಕೆತ್ತುವ ಕಲಾಕೃತಿಯಲಿ
ಚಿತ್ರ ಬಿಡಿಸುವ ಕಲಾವಿದನಿಗೆ
ಕವಿಯ ಕಲ್ಪನೆಗಿಹದು ಪರಿಮಿತಿ
ಕಲೆಯದೆಲ್ಲವು ದೈವದತ್ತವು
             
ಉದಯರವಿಯ ಕಿರಣ ನೋಡಿ
ಪಕ್ಷಿಗಾನದಿಂಪ ಸವಿದು
ಚೆಲುವ ಹೂವ ಕಂಪ ಹೀರಿ
ನಲಿದಾಡುವ ಭ್ರಮರ ಕಂಡು
ತಂಪುಗಾಳಿಸೊಗಸಮಿಂದು
ಸಂತಸದಲಿ ಮನದಣಿಸಿಕೊಳ್ಳಿರೈ

ಗುಂಡಿನ ಗಮ್ಮತ್ತು
   ಗುಂಡದು ಗಂಡಿನ ಗುಂಡಿಗೆ ಗುಂಡು
   ಹೆಂಡತಿ ಹಿಂಡಲು ಹೆಂಡದ ಹುಂಡಿ
   ಪುಂಡನ ಮಂಡೆಯು ಕಂಡಿತು ಗುಂಡಿ

ಬಡಗಿಯು ಬಡಿಯುತ ಬಿಡಿಸಿದ ಬೆಡಗಿಯ
ಮರದಲಿ ಮೆರೆದಳು ಮರವನು ಮರೆತಳು
ಸರಸದ ಸಿರಿಯಲಿ ಸೆರೆತನ ಸರಿದಿರೆ
ಅರಿವಿನ ಅರೆತನ ಅರಿತಳು ಅರಳುತ
ಅರಸನ ಅರಸುತ ಕೋರುತ ಕರೆದಳು

ದೇವರು ಮನುಷ್ಯನನ್ನು ಸೃಷ್ಟಿಸಿದ. ಮನುಷ್ಯ ತನ್ನ ಕನಿಷ್ಠಗಳನ್ನ ಮರೆತು ಮೆರೆದ. ಅರಿವಾಗಲವಗೆ ದೈವದ ಶಕ್ತಿ ಬೇಡಿದ ಮುಕ್ತಿ.

ಬಡಗಿ, ಅರಸ = ದೈವ
ಬೆಡಗಿ = ಮಾನವ
ಅರಳುತ = ವಯಸ್ಸು ಕಳೆಯುತ
ಸೆರೆತನ = ಸೆರೆವಾಸ, ಸೆರೆಯಲ್ಲಿರುವ ಭಾಸ
ಸರಿದಿರೆ = ಸಾಗಿರಲು
ಮರದಲಿ = ಸುಂದರ ಮಾಂಸಖಂಡಗಳ ದೇಹದಲ್ಲಿ
ಮರವನು ಮರೆತಳು = ತನ್ನನ್ನು, ತನ್ನತನವನ್ನು, ಇಹವನ್ನು, ಸೃಷ್ಟಿಸಿದವರನ್ನು ಮರೆತ ಮಾನವ

ಗೀಚುವಾಗ ನಾನು ಅರ್ಥೈಸಿಕೊಂಡಂತೆಯೆ ತಮಗೂ ಆಗಲೆಂದು ವಿವರಣೆ ಅಷ್ಟೇ. ..
ಸ್ವಲ್ಪ philosophically heavy ಅನ್ನಿಸಿದರೆ ಕ್ಷಮಿಸಿ. ..
ಗುಂಡಿನ ಗಮ್ಮತ್ತು ಬರೆದ ಲೇಖನಿಯಲೇ ಇದನ್ನೂ ಬರೆದದ್ದು.... ಗುಂಡಿನ ಗಮ್ಮತ್ತಿಲ್ಲದೆ.... ನನ್ನ ಹೆಂಡತಿ ಮಾಡಿದ್ದ ರುಚಿಯಾದ ಹುಗ್ಗಿ ಮತ್ತು ಪೊಂಗಲ್ ಗಮ್ಮತ್ತಿನಿಂದಲೇ ಬರೆದದ್ದು!